MGNREGA Job Card:- ನಮಸ್ಕಾರ ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ MGNREGA ಜಾಬ್ ಕಾರ್ಡ್ ಹೊಂದಿದವರೆಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದೆ ಆದ್ದರಿಂದ ಈ ಒಂದು ಲೇಖನಿಯ ಮೂಲಕ ಈ ನೆರೆಗಾ ಜಾಬ್ ಕಾರ್ಡ್ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ಸರಕಾರದಿಂದ ಸಿಗುವಂತಹ ಯೋಜನೆಗಳ ಲಾಭ ಮತ್ತು ಜಾಬ್ ಕಾರ್ಡ್ ಹೊಂದಿದವರಿಗೆ ಸಾಕಷ್ಟು ಯೋಜನೆಗಳ ಲಾಭ ಸಿಗಲಿದೆ ಇವುಗಳ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನಿಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಸ್ನೇಹಿತರೆ ಇದೇ ರೀತಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರ ಇತರ ಹಲವು ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವಂತ ವಿವಿಧ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಖಾಸಗಿ ಮತ್ತು ಸರ್ಕಾರಿ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಈ ಸ್ಕಾಲರ್ಶಿಪ್ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಪ್ರತಿದಿನ ಪಡೆಯಬೇಕೇ
ಇದರ ಜೊತೆಗೆ ಪ್ರತಿದಿನ ಸರ್ಕಾರಿ ಹುದ್ದೆಗಳ ಮಾಹಿತಿ ಮತ್ತು ಈ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕಗಳ ಬಗ್ಗೆ ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ವಿವಿಧ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಪಡೆಯಲು ಇದರ ಜೊತೆಗೆ ನಮ್ಮ ರಾಜ್ಯದಲ್ಲಿ ಜಾರಿ ಇರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು
ನೆರೆಗಾ ಜಾಬ್ ಕಾರ್ಡ್ ಅಂದರೆ ಏನು (MGNREGA Job Card)..?
ಹೌದು ಸ್ನೇಹಿತರೆ ಸಾಕಷ್ಟು ಜನರಿಗೆ ನೆರೆಗಾ ಜಾಬ್ ಕಾರ್ಡ್ ಅಂದರೆ ಏನು ಎಂಬ ಮಾಹಿತಿ ಗೊತ್ತಿಲ್ಲ.! ಸ್ನೇಹಿತರೆ ನೆರೆಗ ಜಾಬ್ ಕಾರ್ಡ್ ಅಂದರೆ ನಮ್ಮ ಕೇಂದ್ರ ಸರ್ಕಾರವು ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೀಡುವಂತ ಒಂದು ಐಡಿ ಕಾರ್ಡ್ ಅಥವಾ ಜಾಬ್ ಕಾರ್ಡ್ ಆಗಿದೆ ಈ ಜಾಬ್ ಕಾರ್ಡ್ ಹೊಂದಿದಂತಹ ಜನರಿಗೆ ಅಥವಾ ಕುಟುಂಬದವರಿಗೆ ಖಾತ್ರಿಯಾಗಿ 100 ದಿನಗಳ ಉದ್ಯೋಗ ನೀಡುವ ಭರವಸೆ ನೀಡಲಾಗುತ್ತದೆ..!
ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದಲ್ಲಿ ಹಾಗೂ ಭಾರತ ದೇಶದಲ್ಲಿ ಇರುವಂತ ಕೂಲಿ ಕಾರ್ಮಿಕರಿಗೆ ಮತ್ತು ಬೇಸಿಗೆ ಸಂದರ್ಭದಲ್ಲಿ ಅಥವಾ ರೈತರು ಹಾಗೂ ಕೃಷಿ ಕಾರ್ಮಿಕರು ಮತ್ತು ವಲಸೆ ಹೋಗುವಂಥ ಜನರಿಗೆ ಈ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಾಬ್ ಕಾರ್ಡ್ ಹೊಂದಿದವರಿಗೆ 100 ದಿನ ಖಚಿತ ಉದ್ಯೋಗ ಕೇಂದ್ರ ಸರಕಾರ ಕಡೆಯಿಂದ ನೀಡಲಾಗುತ್ತದೆ.! ಹಾಗಾಗಿ ಪ್ರತಿಯೊಬ್ಬ ನಿರುದ್ಯೋಗಿ ಹಾಗೂ ಇತರ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಹೊಂದುವುದು ಅತಿ ಮುಖ್ಯವಾಗಿದೆ
ಸ್ನೇಹಿತರೆ ಇದರ ಜೊತೆಗೆ ಜಾಬ್ ಕಾರ್ಡ್ ಹೊಂದಿದವರಿಗೆ 100 ದಿನ ಕೆಲಸ ಕೊಡುವುದರ ಜೊತೆಗೆ ಪ್ರತಿದಿನ 349 ರೂಪಾಯಿ ಕೂಲಿಯನ್ನು ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಸಮಾನವಾಗಿ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ ಅಂದರೆ ಒಂದು ವರ್ಷಕ್ಕೆ ಸುಮಾರು ಜಾಬ್ ಕಾರ್ಡ್ ಹೊಂದಿದಂತ ಫಲಾನುಭವಿಗಳು ಕೇಂದ್ರ ಸರ್ಕಾರ ಕಡೆಯಿಂದ ₹34,900/- ಹಣವನ್ನು ಪಡೆದುಕೊಳ್ಳಬಹುದು ಇದರ ಜೊತೆಗೆ ಜಾಬ್ ಕಾರ್ಡ್ ಹೊಂದಿದವರಿಗೆ ಹಲವಾರು ಈ ಯೋಜನೆ ಅಡಿಯಲ್ಲಿ ಪ್ರಯೋಜನಗಳು ಸಿಗುತ್ತವೆ ಅವುಗಳ ವಿವರವನ್ನು ಕೆಳಗಡೆ ನೀಡಿದ್ದೇವೆ
ಜಾಬ್ ಕಾರ್ಡ್ ಇದ್ದವರಿಗೆ (MGNREGA Job Card) ಸಿಗಲಿವೆ ಈ ಪ್ರಯೋಜನಗಳು..?
100 ದಿನ ಖಾತ್ರಿ ಉದ್ಯೋಗ:- ಹೌದು ಸ್ನೇಹಿತರೆ ಜಾಬ್ ಕಾರ್ಡ್ ಹೊಂದಿದವರಿಗೆ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100 ದಿನ ಖಚಿತವಾಗಿ ಉದ್ಯೋಗವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ ಮತ್ತು ಈ ಉದ್ಯೋಗವನ್ನು ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸ್ಥಳಗಳಲ್ಲಿ ಕೊಡಲಾಗುತ್ತದೆ ಹಾಗಾಗಿ ಈ ಒಂದು ಪ್ರಯೋಜನವನ್ನು ಜಾಬ್ ಕಾರ್ಡ್ ಹೊಂದಿದವರು ಪಡೆಯಬಹುದು ಮತ್ತು ಇದರ ಜೊತೆಗೆ ನಿಮಗೆ ಉದ್ಯೋಗ ಸಿಕ್ಕಿಲ್ಲವೆಂದರೆ ನೀವು ನಿರುದ್ಯೋಗ ಭತ್ಯೆ ಅರ್ಜಿ ಹಾಕಿ ಸಂಪೂರ್ಣವಾಗಿ ಎಷ್ಟು ದಿನ ಕೆಲಸ ಸಿಕ್ಕಿಲ್ಲ ಅಷ್ಟು ದಿನದ ಹಣವನ್ನು ಉಚಿತ ಹಣವನ್ನು ಪಡೆದುಕೊಳ್ಳಬಹುದು
ಸಮಾನ ಕೂಲಿ:- ಹೌದು ಸ್ನೇಹಿತರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಇನ್ನೊಂದು ಪ್ರಮುಖ ಉಪಯೋಗವೇನೆಂದರೆ ಜಾಬ್ ಕಾರ್ಡ್ ಹೊಂದಿದಂತಹ ಮಹಿಳೆ ಅಥವಾ ಪುರುಷ ಇಬ್ಬರಿಗೂ ಕೂಡ ಪ್ರತಿದಿನ ₹349 ರೂಪಾಯಿ ಕೂಲಿಯನ್ನು ನೀಡಲಾಗುತ್ತದೆ ಇದು ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಎಂಬ ಭಾವನೆ ಉಂಟಾಗಲು ಸಹಾಯವಾಗುತ್ತದೆ
ಹಣ ನೇರವಾಗಿ ವರ್ಗಾವಣೆ:- ಸ್ನೇಹಿತರೆ ಜಾಬ್ ಕಾರ್ಡ್ ಹೊಂದಿದವರಿಗೆ ಈ ಮಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದಂತ ಕೂಲಿ ಕಾರ್ಮಿಕರಿಗೆ ನೇರವಾಗಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಉಚಿತ ಮನೆಯ ಸೌಲಭ್ಯ:- ಸ್ನೇಹಿತರೆ ಜಾಬ್ ಕಾರ್ಡ್ ಹೊಂದಿದವರಿಗೆ ಇನ್ನೊಂದು ಪ್ರಮುಖ ಉಪಯೋಗವೇನೆಂದರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಯನ್ನು ಪಡೆದುಕೊಳ್ಳಬಹುದು
ರೈತರಿಗೆ ನೆರವು:- ಸ್ನೇಹಿತರೆ ಜಾಬ್ ಕಾರ್ಡ್ ಒಂದೇ ದಂತ ಜನರು ಅಥವಾ ರೈತ ಕುಟುಂಬಗಳು ಈ ಯೋಜನೆ ಅಡಿಯಲ್ಲಿ ತಮ್ಮ ಹೊಲದಲ್ಲಿ ಕ್ಷೇತ್ರ ಬೋದು ನಿರ್ಮಾಣ, ಗುಂಡಿ ತೋಡುವುದು, ಹಳ್ಳ ಊಳೆತ್ತುವುದು ಇತರ ಅನೇಕ ಕಾರ್ಯಗಳನ್ನು ಈ ಯೋಜನೆ ಅಡಿಯಲ್ಲಿ ಮಾಡಿಸಿಕೊಳ್ಳಬಹುದು
ಶೆಡ್ ನಿರ್ಮಾಣಗಳಿಗೆ ಆರ್ಥಿಕ ನೆರವು:– ಹೌದು ಸ್ನೇಹಿತರೆ ಜಾಬ್ ಕಾರ್ಡ್ ಬಂದಿದೆ ಅಂತ ಫಲಾನುಭವಿಗಳು ಈ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಮ್ಮ ಮನೆಯಲ್ಲಿ ಹಸು ಅಥವಾ ಕುರಿ, ಕೋಳಿ, ಹಂದಿ, ಮುಂತಾದ ಪಸು ಸಂಗೋಪನಿಗೆ ಶಡ್ ನಿರ್ಮಾಣಕ್ಕಾಗಿ ಈ ಯೋಜನೆ ಅಡಿಯಲ್ಲಿ ಸುಮಾರು 40,000/- ಗಿಂತ ಹೆಚ್ಚಿನ ಆರ್ಥಿಕ ನೆರವು ಪಡೆಯಬಹುದು
ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ:– ಸ್ನೇಹಿತರೆ ಈ ಜಾಬ್ ಕಾರ್ಡ್ ಹೊಂದಿದವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಪಡೆಯಬಹುದು
ವೈದ್ಯಕೀಯ ನೆರವು:- ಹೌದು ಸ್ನೇಹಿತರೆ ಜಾಬ್ ಕಾರ್ಡ್ ಹೊಂದಿದಂತ ಕೂಲಿ ಕಾರ್ಮಿಕರು ಕೆಲಸ ಮಾಡುವಂತಹ ಸಂದರ್ಭದಲ್ಲಿ ಯಾವುದೇ ಅಪಘಾತ ಉಂಟಾದರೆ ಅಂಥ ಸಂದರ್ಭದಲ್ಲಿ ಈ ಯೋಜನೆ ಅಡಿಯಲ್ಲಿ ವೈದ್ಯಕೀಯ ನೆರವು ಪಡೆಯಬಹುದು ಒಂದು ವೇಳೆ ಮೃತ ಪಟ್ಟರೆ ಅಂಥ ಸಂದರ್ಭದಲ್ಲಿ ಜಾಬ್ ಕಾರ್ಡ್ ಹೊಂದಿದ ಕುಟುಂಬದ ಸದಸ್ಯರಿಗೆ 2 ಲಕ್ಷ ರೂಪಾಯಿವರೆಗೆ ಜೀವ ವಿಮೆ ನೀಡಲಾಗುತ್ತದೆ
ಜಾಬ್ ಕಾರ್ಡ್ (MGNREGA Job Card) ಪಡೆಯಲು ಇರುವ ಅರ್ಹತೆಗಳು..?
- ಸ್ನೇಹಿತರೆ ನೀವು ಜಾಬ್ ಕಾರ್ಡ್ ಪಡೆಯಲು ಬಯಸಿದರೆ ನಿಮ್ಮ ವಯಸ್ಸು ಕನಿಷ್ಠ 18 ವರ್ಷ ಪೂರೈಸಿರಬೇಕು
- ಜಾಬ್ ಕಾರ್ಡ್ ಪಡೆಯಲು ಬಯಸುವಂತಹ ಅರ್ಜಿದಾರರು ಅಥವಾ ಕುಟುಂಬದಲ್ಲಿ ಯಾವುದೇ ವ್ಯಕ್ತಿ ಸರಕಾರಿ ನೌಕರಿ ಅಥವಾ ಉನ್ನತ ಸಂಬಳ ತರುವ ಉದ್ಯೋಗ ಮಾಡುತ್ತಿರಬಾರದು
- ಜಾಬ್ ಕಾರ್ಡ್ ಪಡೆಯಲು ಬಯಸುವಂತಹ ಜನರು ಯಾವ ವರ್ಗಕ್ಕೆ ಸೇರಿದರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು (MGNREGA Job Card) ಬೇಕಾಗುವ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಅರ್ಜಿದಾರ ರೇಷನ್ ಕಾರ್ಡ್
- ಅರ್ಜಿದಾರ ಜಾತಿ ಪ್ರಮಾಣ ಪತ್ರ
- ಅರ್ಜಿದಾರ ಮೊಬೈಲ್ ನಂಬರ್
- ಅರ್ಜಿದಾರ ಆದಾಯ ಪ್ರಮಾಣ ಪತ್ರ
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್
- ಇತರ ಅಗತ್ಯ ದಾಖಲಾತಿಗಳು
(MGNREGA Job Card) ಅರ್ಜಿ ಸಲ್ಲಿಸುವುದು ಹೇಗೆ..?
ಹೌದು ಸ್ನೇಹಿತರೆ ನೀವು ಜಾಬ್ ಕಾರ್ಡ್ ಪಡೆಯಲು ಬಯಸುತ್ತಿದ್ದರೆ ಹಾಗೂ ನೀವು ಸರಕಾರದ ಈ ಮೇಲೆ ನೀಡಿದಂತಹ ಎಲ್ಲಾ ಪ್ರಯೋಜನಗಳು ಪಡೆಯಲು ಬಯಸುತ್ತಿದ್ದರೆ ನೀವು ಜಾಬ್ ಕಾರ್ಡ್ ಹೊಂದಿರಬೇಕಾಗುತ್ತದೆ ಹಾಗಾಗಿ ನೀವು ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೇಲೆ ನೀಡಿದಂತ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಆದ್ದರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ನೆರೆಗ ಜಾಬ್ ಕಾರ್ಡ್ ಯೋಜನೆಯ ಬಗ್ಗೆ ಮಾಹಿತಿ ಪಡೆಯಬಹುದು