ration card correction:- ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ರೇಷನ್ ಕಾರ್ಡಿನಲ್ಲಿ ಹೆಸರು ಸೇರ್ಪಡೆ ಹಾಗೂ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ತಿದ್ದುಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶ ಮಾಡಿಕೊಡಲಾಗಿದ್ದು ಈ ಒಂದು ಲೇಖನಿಯ ಮೂಲಕ ಈ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನು ಮಾಡಬಹುದು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬೇಕಾಗುವಂತ ದಾಖಲಾತಿಗಳನ್ನು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಯಾವ ಸಮಯದಲ್ಲಿ ಮಾಡಲು ಅವಕಾಶವಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ
ಗೃಹಲಕ್ಷ್ಮಿ 15ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.! ಇಲ್ಲಿದೆ ಸಂಪೂರ್ಣ ವಿವರ
ಸ್ನೇಹಿತರೆ ನಿಮಗೆ ಇದೇ ರೀತಿ ರೇಷನ್ ಕಾರ್ಡ್ ಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಹಾಗೂ ನಮ್ಮ ಕರ್ನಾಟಕದಲ್ಲಿ ಜಾರಿ ಇರುವಂತಹ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಈ ಗ್ಯಾರಂಟಿ ಯೋಜನೆಗಳಿಂದ ಫಲಾನುಭವಿಗಳ ಖಾತೆಗೆ ಯಾವಾಗ ಹಣ ಬಿಡುಗಡೆಯಾಗುತ್ತದೆ ಮತ್ತು ನಮ್ಮ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸಬ್ಸಿಡಿಯಲ್ಲಿ ನೀಡಲಾದಂತ ಹಲವಾರು ಸಾಲ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕೆ
ಇದರ ಜೊತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ನೇಮಕಾತಿ ಮಾಡಿಕೊಳ್ಳುವ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಈ ಸರಕಾರಿ ಹುದ್ದೆಗಳಿಗೆ ಯಾವಾಗ ಅರ್ಜಿ ಕರೆಯಲಾಗುತ್ತದೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕಗಳು ಯಾವಾಗ ಎಂಬ ಮಾಹಿತಿಯನ್ನು ಪ್ರತಿದಿನ ಪಡೆಯಬೇಕೇ ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ರೈತ ಯೋಜನೆಗಳ ಬಗ್ಗೆ ಮಾಹಿತಿ ಇತರ 10 ಹಲವಾರು ವಿಷಯಗಳ ಬಗ್ಗೆ ಪ್ರತಿದಿನ ಹೊಸ ಹೊಸ ಸುದ್ದಿಗಳನ್ನು ಹಾಗೂ ಹೊಸ ಹೊಸ ಮಾಹಿತಿಗಳನ್ನು ಲೇಖನ ಮೂಲಕ ಪಡೆದುಕೊಳ್ಳಲು ನೀವು ನಮ್ಮ ವಾಟ್ಸಪ್ ಹಾಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು
ರೇಷನ್ ಕಾರ್ಡ್ ತಿದ್ದುಪಡಿ (ration card correction)..?
ಹೌದು ಸ್ನೇಹಿತರೆ ಸಾಕಷ್ಟು ಜನರು ತಮ್ಮ ರೇಷನ್ ಕಾರ್ಡ್ ಗಳಲ್ಲಿ ಕುಟುಂಬದ ಸದಸ್ಯರ ಸೇರ್ಪಡೆ ಹಾಗೂ ಕುಟುಂಬದ ಸದಸ್ಯರನ್ನು ತೆಗೆದುಹಾಕುವುದು ಹಾಗೂ ಹೊಸದಾಗಿ ಮದುವೆಯಾದ ದಂಪತಿಗಳ ಹೆಸರು ಸೇರ್ಪಡೆಗೆ ಮತ್ತು ರೇಷನ್ ಕಾರ್ಡ್ ಗಳ ಹೆಸರು ಬದಲಾವಣೆ ಮತ್ತು ರೇಷನ್ ಕಾರ್ಡ್ ವಿಳಾಸ ಬದಲಾವಣೆಗೆ ಸಾಕಷ್ಟು ಜನರು ಕಾಯುತ್ತಿದ್ದರು ಅಂತವರಿಗೆ ರಾಜ್ಯ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು
ಹೌದು ಸ್ನೇಹಿತರೆ ಹೊಸದಾಗಿ ಮದುವೆಯಾದಂತ ದಂಪತಿಗಳು ಹಾಗೂ ಮಕ್ಕಳು ಮುಂತಾದ ಹೆಸರುಗಳನ್ನು ಸೇರ್ಪಡೆ ಮಾಡಲು ಇದೀಗ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ಆಸಕ್ತಿ ಇರುವಂತಹ ಕುಟುಂಬಗಳು ಹಾಗೂ ಅರ್ಹ ಕುಟುಂಬಗಳು ತಮ್ಮ ರೇಷನ್ ಕಾರ್ಡ್ ಗಳಲ್ಲಿ ಕುಟುಂಬದ ಹೆಸರು ಸೇರ್ಪಡೆ ಹಾಗೂ ಇತರ ಸದಸ್ಯರ ತೆಗೆದು ಹಾಕುವಿಕೆ ಮುಂತಾದ ಕೆಲಸಗಳನ್ನು ಮಾಡಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ನಾವು ರೇಷನ್ ಕಾರ್ಡ್ ಗಳಲ್ಲಿ ಏನೇನು ತಿದ್ದುಪಡಿ ಮಾಡಬಹುದು ಹಾಗೂ ಯಾವಾಗನಿಂದ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತೇವೆ
ರೇಷನ್ ಕಾರ್ಡ್ ನಲ್ಲಿ ಏನು ಬದಲಾವಣೆ ಮಾಡಬಹುದು (ration card correction)..?
ಕುಟುಂಬದ ಮುಖ್ಯಸ್ಥರ ಬದಲಾವಣೆ:- ಹೌದು ಸ್ನೇಹಿತರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರು ಪುರುಷರಾಗಿದ್ದರೆ ಅಥವಾ ಕುಟುಂಬದ ಮುಖ್ಯಸ್ಥರು ನಿಧಾನವಾಗಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಮುಖ್ಯಸ್ಥರನ್ನು ನೀವು ಬದಲಾವಣೆ ಮಾಡಬಹುದು ಹಾಗೂ ಇದರಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕುಟುಂಬದ ಮುಖ್ಯಸ್ಥರ ಖಾತೆಗಳಿಗೆ ಜಮಾ ಆಗಲು ಪ್ರಾರಂಭವಾಗುತ್ತದೆ.! ಆದ್ದರಿಂದ ಸಾಕಷ್ಟು ರೇಷನ್ ಕಾರ್ಡ್ ಬಂದಿದೆ ಅಂತ ಕುಟುಂಬಗಳು ಈಗಾಗಲೇ ಕುಟುಂಬದ ಮುಖ್ಯಸ್ಥರು ನಿಧನರಾಗಿದ್ದು ಅಂತವರು ತಮ್ಮ ಕುಟುಂಬದ ಮುಖ್ಯಸ್ಥರನ್ನು ಬದಲಾವಣೆ ಮಾಡಿಕೊಳ್ಳಬಹುದು.
ಹೊಸ ಸದಸ್ಯರ ಸೇರ್ಪಡೆ:- ಹೌದು ಸ್ನೇಹಿತರೆ ಇತ್ತೀಚಿಗೆ ಮದುವೆಯಾದಂತ ದಂಪತಿಗಳು ಹಾಗೂ ಮಕ್ಕಳು ಮತ್ತು ಇತರ ಕುಟುಂಬದ ಯಾವುದೇ ಸದಸ್ಯರನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಬಹುದು ಆದ್ದರಿಂದ ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಅಥವಾ ಹೊಸದಾಗಿ ಮದುವೆಯಾದಂತಹ ನವ ದಂಪತಿಗಳು ಅಥವಾ ಇತರ ಕುಟುಂಬದ ಸದಸ್ಯರನ್ನು ಈ ಒಂದು ರೇಷನ್ ಕಾರ್ಡ್ ತಿದ್ದುಪಡಿ ಮಾಡುವ ಸೇರ್ಪಡೆ ಮಾಡಿಕೊಳ್ಳಬಹುದು
ವಿಳಾಸ ಬದಲಾವಣೆ:- ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ನೀವು ಪ್ರಸ್ತುತ ವಾಸ ಮಾಡುವಂತಹ ವಿಳಾಸ ಬಿಟ್ಟು ಬೇರೆ ಪ್ರದೇಶಗಳಿಗೆ ವಲಸೆ ಹೋದರೆ ಅಥವಾ ಬೇರೆ ಸ್ಥಳಗಳಿಂದ ಇತರ ಸ್ಥಳಗಳಿಗೆ ಒಲಸೆ ಬಂದರೆ ಅಥವಾ ನೀವು ಇರುವಂತ ಸ್ಥಳದ ವಿವರ ಅಥವಾ ಊರಿನ ಹೆಸರು ಬದಲಾವಣೆ ಮುಂತಾದ ಕೆಲಸಗಳನ್ನು ಈ ಒಂದು ತಿದ್ದುಪಡಿಯಲ್ಲಿ ಮಾಡಿಕೊಳ್ಳಲು ಅವಕಾಶವಿದೆ
ಸದಸ್ಯರನ್ನು ತೆಗೆದು ಹಾಕುವಿಕೆ:- ಹೌದು ಸ್ನೇಹಿತರೆ ಈ ಒಂದು ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಈಗಾಗಲೇ ಮದುವೆಯಾಗಿ ಉಳಿದಂತ ಮಹಿಳೆಯನ್ನು ತೆಗೆದು ಹಾಕಬಹುದು ಅಥವಾ ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಸದಸ್ಯರು ಬೇರೆ ಯಾಗಿ ವಾಸ ಮಾಡುತ್ತಿದ್ದರೆ ಅಂತ ಸಂದರ್ಭದಲ್ಲಿ ಆ ಸದಸ್ಯರನ್ನು ತೆಗೆದು ಹಾಕಬಹುದು ಅಥವಾ ಮದುವೆಯಾದಂತಹ ನವದಂಪತಿಗಳು ಬೇರೆ ಕುಟುಂಬಗಳಾಗಿ ವಾಸ ಮಾಡುತ್ತಿದ್ದರೆ ಅಂತ ಸದಸ್ಯರನ್ನು ನಿಮ್ಮ ರೇಷನ್ ಕಾರ್ಡ್ ನಿಂದ ತೆಗೆದು ಹಾಕಬಹುದು
ರೇಷನ್ ಕಾರ್ಡ್ ಬದಲಾವಣೆ:- ಹೌದು ಸ್ನೇಹಿತರೆ ಇತ್ತೀಚಿಗೆ ಸಾಕಷ್ಟು ಬಿಪಿಎಲ್ ರೇಷನ್ ಕಾರ್ಡ್ ಗಳು ಎಪಿಎಲ್ ರೇಷನ್ ಕಾರ್ಡ್ ಗಳಾಗಿ ಮಾರ್ಪಾಡು ಆಹಾರ ಇಲಾಖೆಯಿಂದ ಮಾಡಲಾಗಿದೆ ಹಾಗಾಗಿ ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ಗಳನ್ನು ಬಿಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡಬಹುದು
ಕುಟುಂಬದ ಸದಸ್ಯರ E-kyc:- ಹೌದು ಸ್ನೇಹಿತರೆ ಈ ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಕುಟುಂಬದ ಸದಸ್ಯರ E-kyc ಮಾಡಿಸಬಹುದು ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು ಮತ್ತು ಇತರ ಎಲ್ಲಾ ಕೆಲಸವನ್ನು ಈ ಒಂದು ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಮಾಡಲು ಸರ್ಕಾರ ಕಡೆಯಿಂದ ಅವಕಾಶ ಮಾಡಿಕೊಡಲಾಗಿದೆ
ರೇಷನ್ ಕಾರ್ಡ್ ತಿದ್ದುಪಡಿ ಯಾವಾಗ ಪ್ರಾರಂಭ & ಎಲ್ಲಿ ಮಾಡಿಸಬೇಕು (ration card correction)..?
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಇದೇ ಡಿಸೆಂಬರ್ 3 ನೇ ತಾರೀಖಿನಿಂದ ಅವಕಾಶ ಮಾಡಿಕೊಡಲಾಗಿದ್ದು ಕೊನೆಯ ದಿನಾಂಕ ನಿಗದಿ ಮಾಡಿಲ್ಲ ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಬಯಸುವಂತಹ ಕುಟುಂಬಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಹಾಗೂ ಮೇಲೆ ನೀಡಿದಂತ ಎಲ್ಲಾ ಕೆಲಸಗಳನ್ನು ಮಾಡಿಸಬಹುದು.!
ಹೌದು ಸ್ನೇಹಿತರೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ರೇಷನ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸುವಂತಹ ಸದಸ್ಯರು ಅಥವಾ ಕುಟುಂಬಗಳು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ಗಳಾದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು
ಬೇಕಾಗುವ ದಾಖಲಾತಿಗಳು (ration card correction)..?
- ಸದಸ್ಯರ ಆಧಾರ್ ಕಾರ್ಡ್
- ಜನನ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರಗಳು
- ಇತರ ಅಗತ್ಯ ದಾಖಲಾತಿಗಳು